ಮೈಸೂರಿನ ಸಮ್ಮೇಳನ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬೇಟಿಯಾದ ಕವಿಮನಗಳು ಅನೇಕ.

ಕೊಡಗು ಜಿಲ್ಲೆಯ ಬಹುತೇಕ ಎಲ್ಲಾ ಕವಿಮನಗಳು ಆಗಮಿಸಿದರೂ ಬಹುತೇಕರು ಕೊನೆಯ ದಿನದಂದು ಆಗಮಿಸಿದ ಕಾರಣ ಬೇಟಿ ಅಸಾಧ್ಯವಾಯಿತು. ಇನ್ನು ದೂರದ ಊರಿನಿಂದ ಬಂದವರು ಕೆಲವರು ಸೆಲ್ಫಿಗೆ ಸಿಗಲಿಲ್ಲ.

ಕಳೆದ ಸಾಲಿನಲ್ಲಿ ರಾಯಚೂರಿನಲ್ಲಿ ನಡೆದ ಸಮ್ಮೇಳನಕ್ಕೆ ಹೋಲಿಸಿದರೆ ಮೈಸೂರಿನ ಜನತೆಯ ಜೊತೆಗೆ ಆಗಮಿತರು ಕೂಡ ಸಮಾಧಾನ ಚಿತ್ತರಾಗಿದ್ದರು ಎನ್ನಬಹುದು.

ಇನ್ನು ಭೋಜನ ವ್ಯವಸ್ಥೆಯ ಬಗ್ಗೆ ಹೇಳಿದರೆ ರಾಯಚೂರಿನ ಮಾರವಾಡಿ ಸಮಾಜದ ಮೇಲುಗೈ ಎನ್ನಬಹುದು. ಕಿಟ್ ಕರ್ಮಾಕಾಂಡ ಪ್ರತಿವರ್ಷವೂ ಇದ್ದದ್ದೇ.

ಊಟದ ಟಿಕೇಟ್ ವಿತರಿಸದೆ ಟಿಕೆಟ್ ಕೊಡಿ ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರಿಗಳಲ್ಲದವರ ದರ್ಪ ಕನ್ನಡ ಸಾಹಿತ್ಯ ಪರಿಷತ್ತಿನ ನಡೆಯನ್ನು ಅವಹೇಳನ ಮಾಡುವಂತಿತ್ತು.

ಎಂದಿನಂತೆ ಕಾರ್ಯಕ್ರಮದಲ್ಲಿ ಮೊದಲ ದಿನದ ಆರ್ಭಟ ಕೊನೆತನಕ ಉಳಿದಿರಲಿಲ್ಲ ಕೊನೆಯ ದಿನಗಳಲ್ಲಿ ಬಂದವರು ಮೊದಲಿಗೆ ಇರಲಿಲ್ಲ. ಬಂಧುಗಳ ಮದುವೆ ಮಧ್ಯೆ ಬರದಿದ್ದರೆ ಕೊನೆಯವರೆಗೂ ಸಾಕ್ಷಿ ಆಗುವ ಬಯಕೆ ಇತ್ತು. ಅನಿವಾರ್ಯ ಇರಲಾಗಲಿಲ್ಲ.

ಶರೀರ ಕಲ್ಯಾಣ ಮಂಟಪದಲ್ಲಿ ಮನಸೆಲ್ಲಾ ಮೈಸೂರಿನ ಸಮ್ಮೇಳನ ಸ್ಥಳದಲ್ಲಿ ಎಂಬುದು ಅಷ್ಟೇ ಸತ್ಯ.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು