ಓ ಇನಿಯ
ಓ ಇನಿಯ
~~~~~~~~
ಕಾದಿಹೆನು ನಿನಗಾಗಿ ಓ ಇನಿಯ
ಮರೆಯದೇ ಬಾರಯ್ಯ ನೀ ಸನಿಹ
ಮರೆತಿಹೆಯ ಮರೆಯಾಗಿ ಓ ಗೆಳೆಯ
ಜೊತೆ ಜೊತೆಗೆ ಒಲವ ಹರಿಸುವೆಯಾ||ಪ||
ಮನದಲ್ಲಿ ಮೂಡಿಹುದು ಭಾವನೆ
ಆಸರೆಯ ಅರಸಿಹುದು ಕಾಮನೆ
ಅತ್ತಿತ್ತ ಅರಸದಿರು ನನ್ನರಸ
ಬಾಳಲ್ಲಿ ತುಂಬುತ್ತಿರು ಜೀವರಸ ||೧||
ತುಂಬಿದಾ ತನುವಿಗಾಸೆ ಬರಪೂರ
ಆನಂದ ಹೊಂದುವಾ ಬಳಿ ಬಾರ
ಬಳಸಿ ಬರ ಸೆಳೆದು ತೋಳ ಹಾರ
ನೀನೀಡು ಬಾರ ತನುವಿಗೆ ಆಧಾರ ||೨||
ಮಲ್ಲಿಗೆಯ ಘಮಲಿಗೆ ಬಾ ಬಾರ
ಸಂಪಿಗೆಯ ಒಲವಿಂದ ನೀ ತಾರ
ಕೋಮಲ ಒಡಲಿದು ಹೂ ಹಾರ
ಬಾಡುವ ಮುನ್ನವೇ ಮನಸಾರ
ನೀನಾಗು ಬಾರ ಕೊರಳಿಗೆ ಹಾರ ||೩||
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೭/೧೧/೨೦೧೭
Comments
Post a Comment