ಗಝಲ್ ೫

ಗಝಲ್ -೫
,~~~~~~,
ಉರಿವ ಸೂರ್ಯನ ತುಣುಕಾದವಳು ನೀನಲ್ಲವೇ  ಧರತಿ
ತನುವು ತಣಿಯಲೆಂದೇ ಯುಗಯುಗವ  ಕಾದವಳು ನೀನಲ್ಲವೇ ಧರತಿ

ರವಿಯನ್ನೆ ಅನುಸರಿಸಿ ಅವನಿ ಎನಿಸಿಕೊಂಡವಳು ನೀನೇ
ಅವರಿವರೆನ್ನದೇ ಸಮಾನತೆ ಮರೆತು ಮೆರೆದವಳು
ನೀನಲ್ಲವೇ ಧರತಿ

ನಿನ್ನ ಸುತ್ತುವವನ ಬಲ್ಲ ಭೂಮಾತೆ ಜಗದ ಮಾತೆ ಜೀವಧಾತೆ
ಸುತ್ತುವವನ ನೀ ನನ್ನ ಅನುಸರಿಸಿದೆ ಎಂದವಳು ನೀನಲ್ಲವೇ ಧರತಿ

ಸುತ್ತ ಮುತ್ತಿದಾ ನೀಲಿ ಕಡಲ ನೀರಿಗೆ ಬಸಿರಾದವಳು 
ಬಸಿರು ಹರಿದು ಹಸಿರು ಬೆಸೆದು ಜೀವಸಂಕುಲವ ತಂದವಳು ನೀನಲ್ಲವೇ ಧರತಿ

"ಸಿಡಿಲು"ನ ಗುಡುಗು ಮಿಂಚುಗಳ ಸಹಿಸಿ ನೋವ ದಹಿಸಿದೆ
ಧಗ ಧಗಿಸಿ ಉರಿದರೂ ಕಡುನುಡಿಯನ್ನಾಡದೇ ಮಿಂಚಿದವಳು ನೀನಲ್ಲವೇ ಧರತಿ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೮/ ೧೧/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು