ಮೊಗವಾಡ
ಮೊಗವಾಡ
~~~~~~~
ಮನುಷ್ಯನ ಮೊಗವೊಂದು ಶಿಲೆಯಂತೆ
ಗುಡಿಯಲ್ಲಿಹ ಶಿಲೆಯೆಲ್ಲವೂ ದೇವರಂತೆ
ನಗುನಗುತಿಹ ಮೊಗವದು ಮೊದಲಂತೆ
ಒಳಗೊಳಗೇ ಅಡಗಿಹಿದು ಅರಿಯದಂತೆ
ಮತ್ತೊಂದು ಮೊಗವಿದೆ ನಿಜವಂತೆ
ನಗುವನ್ನೇ ಮುಖವಾಡ ಧರಿಸಿದಂತೆ
ಮಗುವಿನ ಮೊಗವದು ಮುಗ್ದತೆಯೇ
ತುಂಬಿದ ದೇವ ದೇವತೆ ಮೊಗದಂತೆ
ಬಾಯಲ್ಲಿ ಹರಿ ಹರಿ ಮನದಲ್ಲಿ ಅರಿ
ಸತ್ತರೂ ಬಿಡರು ಇವರು ಹೊಟ್ಟೆ ಉರಿ
ಅನ್ಯರ ಗೆಲುವಿಗೆ ತಾ ಕೊರಗುವ ಪರಿ
ಗೆಲ್ಲದಂತೆ ಕಾಲೆಳೆವ ಅಪಾಯಕಾರಿ
ಮನುಜನ ಮನ ಗೋಸುಂಬೆ ಬಣ್ಣ
ಚಣಚಣಕೂ ಬದಲಾಗುವುದು ಅಣ್ಣ
ಒಬ್ಬರ ಕಣ್ಣಿಗೆ ಬೆಣ್ಣೆ ಮತ್ತೊಬ್ಬಗೆ ಸುಣ್ಣ
ನಾಟಕವೇ ಮುಚ್ಚುವವರೆಗೆ ನಮ್ಮ ಕಣ್ಣ
ತೊಲಗಿಸಿ ಅಕ್ಕ ಅಣ್ಣಗಳೇ ಹೊಲಸು ಮನ
ತೊರೆಯಿರಿ ಅವಲಕ್ಷಣದ ನಡೆ ನುಡಿಗಳನ್ನ
ಪಡೆಯಿರಿ ಅವನೊಲುಮೆಯ ನಡತೆಯನ್ನ
ಹಾಗಾದರೂ ಪಡೆವ ಚಿರ ಮುಕುತಿಯನ್ನ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೩/೧೧/೨೦೧೭
Comments
Post a Comment