ಸಮ್ಮೇಳನ ಭಾಗ ೨
ಪೊನ್ನಂಪೇಟೆ ಸಮ್ಮೇಳನ - ಭಾಗ ೨
~~~~~~~~~~~~~
ಕಳೆದಿರುಳು ಹೊರಳಿ ಮರಳಿತು
ಕನ್ನಡ ಕರುಳು ನಮ್ಮ ಮರುಳು
ಮಹಿಳಾ ಗೋಷ್ಠಿ ಗೀತಗಾಯನ
ಸಾಂಸ್ಕೃತಿಕ ಸೌರಭದ ತಿಲ್ಲಾನ
ಅನೇಕತೆಯ ನಡುವೆ ಏಕತೆಯ
ಬಹುಭಾಷೆಯ ನಡುವೆ ಕನ್ನಡವ
ಕವಿ ಕವಯತ್ರಿಯರ ಪ್ರೌಢಿಮೆಯ
ಕವಿಗೋಷ್ಠಿ ಹೊನ್ನ ಮೆರವಣಿಗೆಯ
ಕಣ್ಮನ ತುಂಬಿಕೊಳ್ಳುವ ಮುನ್ನ
ಬಂತು ಬಹಿರಂಗ ಅಧಿವೇಶನ
ಅತ್ಯಮೂಲ್ಯ ನಿರ್ಣಯ ಮಂಡನೆ
ಆತ್ಮ ಸಾಕ್ಷಾತ್ಕಾರಕೆ ಮತ್ತೆ ಚಿಂತನೆ
ಸನ್ಮಾನ ಸಮಾರಂಭ ಸಕಲ ಕ್ಷೇತ್ರಕು
ವಿಶೇಷ ಗೌರವ ಮುಂದೆ ನಡೆಯಿತು
ಸಮಾರೋಪ ಸಮಾರಂಭದ ಮೆಲುಕು
ಕೊಡವ ನೈಟ್ಸ್ ಸಾಂಸ್ಕೃತಿಕ ಸಂಭ್ರಮ
ತಡರಾತ್ರಿ ಚಳಿಯ ಮರೆಸಿ ಮೆರೆಸಿತು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೨/೧೧/೨೦೧೭
Comments
Post a Comment