ತಲ್ಲಣ

ಹಸಿವು ಮೂರು ಹೊತ್ತಿನ ತಲ್ಲಣ
ಬಡವನಿಗೆ ತುತ್ತು ಅನ್ನಕ್ಕಾಗಿ ತಲ್ಲಣ
ಸಿರಿವಂತಗೆ ಹಣಕಾಯುವ ತಲ್ಲಣ
ಇದು ಜಗತ್ತಿನ ದಿನನಿತ್ಯದ ತಲ್ಲಣ.

ಕೋಟಿ ಕೋಟಿ ಕೂಡಿಟ್ಟುಕೊಂಡವರಿಗೆ
ನೋಟು ಬದಲಾಯಿಸಲಾಗದ ತಲ್ಲಣ
ಒಂದೇ ನೋಟಿಟ್ಟುಕೊಂಡವಗೆ ಬ್ಯಾಂಕ್
ಅಕೌಂಟಿಲ್ಲದ ಕಾರಣ ಚಲಾವಣೆಯಾಗದೆ
ಇರುವುದನ್ನು ಕಳೆದುಕೊಳ್ಳುವ ತಲ್ಲಣ

ರೈತ ಬಂಧುಗಳಿಗೆ ಬೆಳೆಗೆ ನೀರಿಲ್ಲದೇ ತಲ್ಲಣ
ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೇ ರೈತರ ತಲ್ಲಣ
ಬೆಂಬಲ ಬೆಲೆಯಿಲ್ಲದೇ ರೈತ ಸಂಕುಲಕ್ಕೆ ತಲ್ಲಣ
ಮಳೆಯಿಲ್ಲದೇ ಇಳೆಗೆ ಬರಗಾಲದ ತಲ್ಲಣ

ದಕ್ಷ  ಅಧಿಕಾರಿಗಳಿಗೆ ಬ್ರಷ್ಟರಿಂದ ತಲ್ಲಣ
ಉಧ್ಯಮಿ ಕುಟುಂಬಗಳಿಗೆ  ರೌಡಿಗಳಿಂದ ತಲ್ಲಣ
ಮಧ್ಯಪಾನ ಮಾಡಿ ಸಿಕ್ಕಿಬಿದ್ದ ಚಾಲಕರು
ದಂಡ ಕಟ್ಟಿ ಬಚಾವಾದರೂ ಬೆಂಬಿಡದ ತಲ್ಲಣ

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮಿನಿಂದಾಗಿ
ಕ್ಲಪ್ತ ಸಮಯಕ್ಕೆ ಆಪೀಸಿಗೆ ತಲುಪಲಾರದ ತಲ್ಲಣ
ಕೋರ್ಟ್ ಕೇಸುಗಳು ಏಕಪಕ್ಷೀಯ ಆಗುವ ತಲ್ಲಣ
ಯಾವುದೇ ಗೆಳೆಯರನ್ನು ಬೇಟಿ ಮಾಡಲು ಆಗದೇ ತಲ್ಲಣ 

ನಿತ್ಯ ಅಪಘಾತ. ಮೃತರಾದವರ ಕುಟುಂಬದವರು ತಲ್ಲಣ
ಗಾಯಾಳುಗಳ ಜೊತೆಗೆ ಬದುಕುಳಿದ ಕುಟುಂಬದವರ ತಲ್ಲಣ
ಆ ರಕ್ತಮಾಂಸದ ಮುದ್ದೆ ಹರಿದ ಬಟ್ಟೆ ಮುರಿದ ವಾಹನ
ಕಿರಿದಾದ ರಸ್ತೆ ಮುರಿದು ತುಂಡಾದ ಕೈಕಾಲು ಸುರಿಯುತ್ತಿರುವ ರಕ್ತವನ್ನು ಕಂಡು ಸಾರ್ವಜನಿಕರು ತಲ್ಲಣ

ತಲ್ಲಣ ಎಂಬುದು ಈ ಹೊತ್ತಿನ ಆ ಹೊತ್ತಿನ ತಲ್ಲಣವಲ್ಲ
ಪ್ರತಿಯೊಬ್ಬರ ಬಾಳಿನಲ್ಲಿ ನಿತ್ಯ ಒಂದಿಲ್ಲೊಂದು ತಲ್ಲಣ
ಇದನ್ನರಿತು ಶಾಂತ ನಿರ್ಲಿಪ್ತ ಬದುಕು ಸಾಗಿಸೆ ಇಲ್ಲ ತಲ್ಲಣ

ವೈಲೇಶ ಪಿ ಯೆಸ್
ಕೆ.ಬೋಯಿಕೇರಿ

19/11/2016

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು