ನಗುವೇ ಆಳುವ ಕಾಲ
ನಗುವೇ ಆಳುವ ಕಾಲ
~~~~~~~~~~~
ನಗುವೇ ಆಳುವ ಕಾಲ
ಅಳುವೇ ನಗುವಿನ ಬಲ
ಅಮ್ಮ ಕಂಡು ಮಗುವ ಲೀಲ
ಮಗುವಾಗಿ ಅಮ್ಮನ ಬಾಲ
ಆಟ ಆಡಿ ಅಂಗನವಾಡಿ
ಓದಿ ಓಡಿ ನಲಿ ನಲಿದಾಡಿ
ಅಕ್ಷರಶಃ ಅಕ್ಕರೆ ಆಟವಾಡಿ
ನಲಿದೆವು ನಾವು ಜತೆಗೂಡಿ
ಕಪಟ ವಿಕಟ ನಮಗಿಲ್ಲ
ಜಗದ ನಿಯಮ ತಿಳಿದಿಲ್ಲ
ಬಾಗದ ಮನ ನಮದಲ್ಲಾ
ತಿಳಿದಿರಲಿ ಇದು ತಮಗೆಲ್ಲಾ
ನಾವು ಮುಗ್ಧ ಮನದ ಮಕ್ಕಳು
ನಿಮ್ಮಿಂದಲೇ ಸಕಲ ಅರಿಯಲು
ಕಲಿಸಿರಿ ಬಾಳ ಹಣತೆ ಬೆಳಗಲು
ಜಗವಾಗಲಿ ಸುಖದ ಬಯಲು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೫/೧೧/೨೦೧೭
Comments
Post a Comment