ನಾನು ಬೇಕಿಲ್ಲ

ನಾನು ಬೇಕಿಲ್ಲ
~~~~~~~~

ನಾನು ನಾನಾಗಿರಲಿಲ್ಲ 
ನಾನು ಇರಲೇ ಇಲ್ಲ
ನಾನು ನಾನಾಗುವ ಮುನ್ನ ಹೀಗಿರಲಿಲ್ಲ
ನಾನು ನಾನಾಗಲು ಕಾರಣ ನಾನಲ್ಲ
ನಾನು ನಾನಾಗಲು‌ ಕಾರಣರಾದವರು ಯಾರೆಂದು ತಿಳಿದಿಲ್ಲ

ನಾನು ಎಲ್ಲಿಂದ ಬಂದೆ ಎಲ್ಲಿಗೆ ಹೊರಟೆ ಅದು ತಿಳಿದಿಲ್ಲ
ನಾನು ಬಂದಾಗ ಹೀಗಿರಲಿಲ್ಲ ಅದು ಹಾಗಲ್ಲ ಕಣ್ಣು ತೆರೆಯಲು ಸಾಧ್ಯವಿರಲಿಲ್ಲ
ಹಸಿವು ನೀರಡಿಕೆಯ ಅರಿವು ಇರಲಿಲ್ಲ ಅಳುವಿನ ಹೊರತು ಮತ್ತೇನು ತಿಳಿದಿರಲಿಲ್ಲ
ನಗಿಸಿದರೆ ನಗುತಿದ್ದೆ ನೋಡಿದೆರ ಪಿಳಿಪಿಳಿ ಜಗವೆಲ್ಲಾ ಜಗಮಗ

ಕಾಲಚಕ್ರದ ಹೊಡೆತಕೆ ಅದೆಲ್ಲಾ ಮರತೆ
ಮರೆತುದು ಎಂದರೆ ಅಂತಿಂಥ ಮರೆವಲ್ಲಾ
ಹೆತ್ತವರು ಸಾಕಿದವರು ಬೆಳೆಸಿದವರು ಹರಸಿದವರ ಅರಿವಿಲ್ಲ
ಕಾರಣ ನನಗೆ ನಾನು ಬಂದಿದೆ ಹಳತು ಮರೆತಿದೆ ನಾನು ಮೆರೆದಿದೆ

ಕಣ್ತೆರೆಸುವವರು ಕಣ್ಮುಚ್ಚಿದ್ದಾರೆ
ನಾನು ನಾನಲ್ಲ ಅವನಲ್ಲದೇ ಬೇರಿಲ್ಲ ಎಂಬುದು ಬೇಕಿಲ್ಲ
ಯಾರಿಗೆ ಯಾರೂ ಇಲ್ಲ ಎಂಬ ಅರಿವು ಇಲ್ಲ
ಏನೇ ಆದರೂ ಯಾರಿಗೆ ಆದರೂ ನಾನು ಬರಬಾರದಲ್ಲ ಸತ್ಯಕ್ಕೆ ಸಾವಿಲ್ಲ
ಇಂದೇಕೊ ನಾನು ನಾನಾಗಿಲ್ಲ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೪/೭/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು