ಮಾತೆ ವಾಗ್ದೇವಿ

ಮಾತೆ ವಾಗ್ದೇವಿ
~~~~~~~~

ಹಿಂದೆ ಗೈದ ಕಿಂಚಿತ್ತ್ ಪುಣ್ಯದಿಂದಲಿ
ದೊರಕಿದೆ ಎನಗೀ ಭಾಗ್ಯ
ಒಲಿದಿದೆಯಿಂದು ಕವಿವರೇಣ್ಯರ ಬಳಗದ
ನಿರಂತರ ಗೆಳೆತನದ ಸೌಭಾಗ್ಯ
ಎಳೆತನದಿ ಹಂಬಲವಿದ್ದೊಡೇನು ಫಲ
ಬೆಂಬಲವ ಅರಿಯದೆ ಸಿಗದು ಫಲ
ಕನ್ನಡಾಂಭೆಯೇ ಎನ್ನೆಯ ಭವಭವಾಂತದಿಂದ
ನಿನ್ನಯ ಸೇವೆ ಗೈವುದು ಮಹಾ ಭಾಗ್ಯವೆನಗೆ

ಕಾವೇರಿ ನದಿ ತಟಿಗೆ ಪುಟ್ಟಿ ನಾ ಕೃತಕೃತಾರ್ಥನಾದೆನು ಧನ್ಯೋಸ್ಮಿ
ಪೂರ್ವಸೂರಿಗಳಂತೆ ಬೃಹತ್ ಕೃತಿಗಳ ಸೃಷ್ಟಿಸಲರಿಯದಾದೆನು ನಾಂ
ನಿತ್ಯಸತ್ಯವನವಲೋಕಿಸಿ ಕಿರುಗವಿತೆ ಮರಿಗವಿತೆಗಳ ಸೃಷ್ಟಿಸುವೆನೊಂ
ವಾಗ್ದೇವಿಯಾಮೃತವ ಸವಿಯೆ ನಿತ್ಯ ಸತ್ಯ ದರುಶನಕೆ ಕಾದಿಹೆನು
ಪೊರೆಯೆಯ್ಯ್ ದೇವಿ ಭಕ್ತಿಯಿಂದಾಹ್ವಾನಿಪೇನ್ ಮಾತೆ ವೀಣಾಪಾಣಿ ನಮೋಸ್ತುತೇಂ

ವೈಲೇಶ ಪಿ ಯೆಸ್
ವಿರಾಜಪೇಟೆ
12/11/2016

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು