ನಭದೊಡೆಯ
ನಭದೊಡೆಯ
~~~~~~~~
ನಡುಗುತ್ತಾ ಎದ್ದ ನಭದೊಡೆಯ ನಸುಕಿನ
ಜಾವದ ಚಳಿಗೆ ಮರುಕ್ಷಣವೇ ಮಲಗಿದ ಮಗದೊಮ್ಮೆ ಎದ್ದು ನಿಂತವಗೆ ಸಂಶಯ ಕಾಡಿತ್ತಾ ಈ ಇರುಳು ಇಷ್ಟು ಬೇಗ ಮುಗಿದೋಯ್ತಾ?
ಮನಮೋಹಕ ರೂಪದ ವಾಯುವಿನ ಸೋದರಿಯೋ ಎಂಬ ಭ್ರಮೆಯ ಭಾವ ತರಿಸುವ ಮೇಘರಾಜನ ಮುದ್ದಿನ ಕುವರಿ
ಮಂಜುಳಾ ಮಂಜುಹನಿ ಸದ್ದಿಲ್ಲದೇ ತನ್ನನ್ನಾವರಿಸಿ ತಬ್ಬಿ ಮಲಗಿದ ಕಂಡು ಕೆಂಡಮಂಡಲವಾದನಾ ನಭದೊಡಯ
ಮಸೀದಿಯ ಭಾಂಗನು ನೆಚ್ಚದೇ ಇಗರ್ಜಿಯ ಗಂಟೆಗೆ ಕಿವಿಯೊಡ್ಡದೆ ಮಂದಿರ ಮಂತ್ರಕೆ ಬೆಚ್ಛದೇ ಭಟ್ಟರ ಸುಪ್ರಭಾತಕೆ ಸೋತುಹೋಗದೇ ಮಂಗಳಾರತಿಗೆ ಮನಸೋಲದೇ ಇಷ್ಟು ದಿನ ದಣಿವಿಲ್ಲದೆ ದುಡಿದುದು ವ್ಯರ್ಥವಾಯಿತೇ ಎಂದು ಮಿಡುಕಿದನಾ ರವಿ
ಬಂಗಾರದ ತೇರಿನೊಳಡಗಿ ಬಂದೊದಗಿದ ಅಡೆತಡೆ ಅಡ್ಡಗಾಲುಗಳನು ದಿಟ್ಟತನದಿ ದಿಟ್ಟಿಸಿ ಹುಟ್ಟಡಗಿಸಿ ಬಾಚಿ ತಬ್ಬಿಕೊಂಡಿದ್ದ ಮಂಜುಹನಿಯೆಂಬ ಪ್ರೇಯಸಿಯ ಕೊಡವಿ ಕೆಡವಿ ಮೈತಡವಿದ ಮೈಮರೆವನು ಗುದ್ದಾಡಿ ಒದ್ದೋಡಿಸಿದನಾ ಅದಿತಿ
ಗುಡ್ಡಬೆಟ್ಟಗಳ ನಡುವಿಂದ ಕಡಲಿನಾ ತಡಿಯಿಂದ ಮರಗಳ ಮರೆಯಿಂದ ಮೇಘಗಳೆಡೆಯಿಂದ ಹಕ್ಕಿಗಳಿಂಚರಕೆ ಕಿವಿಯಾಗಿ ನಮಸ್ಕರಿಸಿದ ಪ್ರಾಣಿಸಂಕುಲಕೆ ತಲೆಬಾಗಿ ಮಂಜಿನ ಬಾರಕೆ ತಲೆದೂಗಿರುವ ಮರದೆಲೆಗಳಿಗೆ ಅಭಯವನ್ನಿತ್ತು ಬರುವ ಹೊತ್ತು ಮುಂಜಾವ ಗಳಿಗೆ ಕೋಳಿ ಕೂಗಿ ಎಂಟಾಗಿತ್ತು.
ವೈಲೇಶ ಪಿ ಎಸ್
ವಿರಾಜಪೇಟೆ
ದ. ಕೊಡಗು
11/11/2016
Comments
Post a Comment