ಹಂಬಲ

ಹಂಬಲ
===========================

ಚಂದಮಾಮನ ಕಾಣುವಾಸೆ ಎನಗೂ
ತೋರಿಸಬಾರದೆ ಗೆಳತಿ ನಿನ್ನ ಮಗುವಿಗೂ
ಮರೆಯಲಾಗದು ನೆನಹು ಎಳೆತನದಿ ಅಮ್ಮ
ಉಣಲಾರನೆಂದು ತೋರಿಸಿದರೂ ಗುಮ್ಮ
ಬರುವನೆಂದರೂ ಉಣದೇ ಕಾಡಿದಾಗಲೇ

ಬಾನಂಗಳದ ಚಂದಿರನ ಕರೆದು ಬಾ ಚಂದಿರ
ನನ್ನ ಮುದ್ದಿನ ಕಂದ ಉಣಲಾರ
ತುಂಬಿಸಿಕೊ ನಿನ್ನ ಖಾಲಿಯಾದ ಹೊಟ್ಟೆ
ಎಂದಾಗ ಓಡೋಡಿ ಹೋಗಿ ನಾ ಕೆಟ್ಟೆ
ಎಂದು ಕೈ ತುತ್ತು ತಿಂದ ನೆನಹು

ಅಪ್ಪ ಅಮ್ಮನಿಲ್ಲದೇ ನನಗೆ ನೀನೇ ಆಧಾರ
ನೀ ಕರೆದರೆ ಬರದಿರಲಾರ ಚಂದಿರ
ಬಂದು ತೋರೆ ಕೈ ತುತ್ತು ತುಂಬಿದ ಕರ
ಹಗಲಿಡೀ ಚಂದಿರನಿಗುಣಿಸಿದ ಧಿನಕರ
ಎಂದಿಗೂ ಕೇಳದೆ ಯಾವುದೇ ಕರ

ನಿನ್ನ ಮಡಿಲಲ್ಲಿ ನಾ ಮಗುವಾಗುವ ಹಂಬಲ
ಅದಕ್ಕಿರಲಿ ನಿನ್ನ ಮನದುಂಬಿದ ಬೆಂಬಲ.

ವೈಲೇಶ ಪಿ ಯೆಸ್
ಕೆ ಬೋಯಿಕೇರಿ
ವಿರಾಜಪೇಟೆ
5/11/2016

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು