ಬೇರೇನೂ ಬೇಕಿಲ್ಲ


ಸ್ಪರ್ಧೆಗಾಗಿ

ಬೇರೇನೂ ಬೇಕಿಲ್ಲ
~~~~~~~~~~
ಸರಸ ವಿರಸಗಳ ಸಮರಸವೇ ಜೀವನ
ಇಲ್ಲದಿರೆ ಜೀವನ ತಾಳ ಮೇಳವಿಲ್ಲದ ಗಾಯನ
ತಿರಿದು ತಿಂದರೂ ಸರಿ ಹಂಗಿನರಮನೆ ಬೇಡ
ಮುರಿದು ಬಿದ್ದ ಸ್ನೇಹಕೆ ಮತ್ತೆ ಕೈ ಚಾಚಬೇಡ

ಮುಲಾಜಿಗೆ ಬಸಿರಾದರೆ ನಮಗಷ್ಟೇ ನೋವು
ಸೋತು ಸುಣ್ಣವಾದಾಗ ಚಾಚಲಾರರು ಬಾಹು
ಸೀಮಿತಕ್ಕನುಗುಣವಾಗಿ ಇರಲಿ ನಮ್ಮಯ ಗಣ
ಸಿರಿವಂತಿಕೆ ಇರದಿದ್ದರೂ ಮನದಲ್ಲಿರಲಿ ಸುಗುಣ

ನೋವೋ ನಲಿವೋ ಎಂದಿಗೂ ಎದೆಗುಂದದಿರಲಿ
ನಾವೆಲ್ಲರೂ ಒಂದೆಂಬ ಮನೋಭಾವ ತುಂಬಿರಲಿ
ಕೋಟಿ ಹೊನ್ನ ಕೊಡುವ ದುಷ್ಟರೂ ದೂರವಿರಲಿ
ಸಿಗಲಿರುವುದು ಸಿಗುವುದು ತಕ್ಕ ಸಮಯ ಬರಲಿ 

ಬರುವಾಗ ಜೊತೆಗೆ ಬಂದವರಾರು ಇರಲಿಲ್ಲವಲ್ಲ
ಹೋಗುವಾಗ ಧರ್ಮ ಕರ್ಮದ ಹೊರತು ಬೇರಿಲ್ಲ
ಮೂರು ದಿನದ ಸಂತೆಯಲಿ ಅಹಂಕಾರ ನಮಗಿಲ್ಲ
ನಾವಳಿದರೂ ನಾಮವುಳಿಯಲಿ ಬೇರೇನೂ ಬೇಕಿಲ್ಲ

ವೈಲೇಶ ಪಿ ಯೆಸ್ ಕೊಡಗು
೩೦/೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು