ಮಹರ್ಷಿ ವಾಲ್ಮೀಕಿ
ಮಹರ್ಷಿ ವಾಲ್ಮೀಕಿ
~~~~~~~~~~~
ವಲ್ಮೀಕ ಮುಚ್ಚಿದ ಘಮ ಘಮ ಸುಮವೆ
ರಾಮಾಯಣ ಮಹಾಕಾವ್ಯದ ಆಗಮವೆ
ಅಮರ ಮೇರುಗಿರಿಯಾದರಿ ಅಸಮವೆ
ಕೈ ಪಿಡಿದೆನ್ನನು ಬರೆಯಿಸಿರಿ ಸುಗಮವೆ
ಜಿಹ್ವೆಯು ಹೊರಳದೇ ಮರ ಮರವೆಂದೆ
ರಾಮಾಯಣ ಎಂದಾಯಿತದು ಮುಂದೆ
ಬರಹದಿ ಸಕಲ ಕುಲ ಮನ ಮನೆಯಾದೆ
ನಿನ್ನೊಳಗೆ ಸೇರಿ ಜಗದ ಜ್ಯೋತಿ ನೀನಾದೆ
ಸಂಸಾರ ಪಾಪವನು ಹೊರುವುದೆಂದರಿತೆ
ನಿಜ ಸಮಾಜ ವಿರೋದಿಯು ನೀನಾಗಿದ್ದೆ
ಜಪ ತಪದ ತಾಪದಲಿ ಅರಳಿ ಹೂವಾದೆ
ಜಗದ ನಿಯಮಕೆ ದಾರಿ ದೀಪ ನೀನಾದೆ
ನಿನ್ನಯ ನುಡಿಗಳ ಹಣತೆಯನು ಹಚ್ಚು
ಮನವ ಮಾಡಿ ಆರಿಸು ತಮದ ರಚ್ಚು
ನಿನ್ನಿಂದ ಮೂಡಲಿ ಭರವಸೆಯ ಕೆಚ್ಚು
ತಾರತಮ್ಯ ಅಳಿಸಿ ಒದ್ದೋಡಿಸು ಹುಚ್ಚು
ಪ್ರಕೃತಿಯ ಮಡಿಲ ಮಗುವು ನಿನಾಗಿದ್ದೆ
ನಿನ್ನೀ ಬರಹದಲಿ ವಿರೋಧಿಗಳನೇ ಗೆದ್ದೆ
ವಿಶ್ವ ಮಾನ್ಯನು ಗುರುವೆ ನಿಮಗೆ ಶರಣೆಂಬೆ
ಮಹರ್ಷಿ ವಾಲ್ಮೀಕಿ ಆದಿಕವಿ ನೀವೇ ತಂದೆ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೫/೧೦/೨೦೧೭
Comments
Post a Comment