Posts

ಸುತ್ತಲಿರುವವರ ಘನ ಚಿತ್ತವನು ಸೆಳೆಯುತಲಿ ಮತ್ತಿನೊಳು ಸಿಲುಕಿಸುವ ಯತ್ನವೇಕೆ| ಮುತ್ತಿನಿರವನರಿಯದೆ ಹತ್ತರೊಳಗೊಂದಾಗಿ ಸತ್ತುಹೋಗದಿರಿಯೆಂಬ  ಬೊಮ್ಮಲಿಂಗ|೧೫೧|| ಸುತ್ತಲಿರುವವರ ಘನ ಚಿತ್ತವನು ಸೆಳೆಯುತಲಿ ಮತ್ತಿನೊಳು ಸಿಲುಕಿಸುವ ಯತ್ನವೇಕೆ| ಮುತ್ತಿನಿರವನರಿಯದೆ ಹತ್ತರೊಳಗೊಂದಾಗಿ ಸತ್ತುಹೋಗದಿರಿಯೆಂಬ  ಬೊಮ್ಮಲಿಂಗ|೧೫೧|| ಹುಟ್ಟಿದರು ಕೆಟ್ಟವರ ಮೆಟ್ಟಿ ಮುರಿಯಲು ಬಲ್ಲ  ಜಟ್ಟಿಯಂದದಿ ನಿಂದ ರಾಷ್ಟ್ರಬಂಧು| ಸೊಟ್ಟಮನಗಳಿಗಿಂದು ತಟ್ಟದಂತಿಹುದವರ  ದಿಟ್ಟನುಡಿಗಳು ಕಾಣ ಬೊಮ್ಮಲಿಂಗ||೧೫೨| ಹುಟ್ಟಿದರು ಕೆಟ್ಟವರ ಮೆಟ್ಟಿ ಮುರಿಯಲು ಬಲ್ಲ  ಜಟ್ಟಿಯಂದದಿ ನಿಂದ ರಾಷ್ಟ್ರಬಂಧು| ಸೊಟ್ಟಮನಗಳಿಗಿಂದು ತಟ್ಟದಂತಿಹುದವರ  ದಿಟ್ಟನುಡಿಗಳು ಕಾಣ ಬೊಮ್ಮಲಿಂಗ||೧೫೨| ಕಟ್ಟಿ ಬೆಳೆಸುತ ದೇಶ ಮುಟ್ಟಿ ಜನಗಳ ಮನವ  ಮಟ್ಟಿಯೊಳು ಸೇರಿದರು ದೀನ ಬಂದು| ಹುಟ್ಟದಿರಿ ಕಂದಗಳೆ ಮೆಟ್ಟುವರೆ ಕಾದಿಹರು  ದಿಟ್ಟತನ ತೋರುವರ ಬೊಮ್ಮಲಿಂಗ||೧೫೩||  ಕಟ್ಟಿ ಬೆಳೆಸುತ ದೇಶ ಮುಟ್ಟಿ ಜನಗಳ ಮನವ  ಮಟ್ಟಿಯೊಳು ಸೇರಿದರು ದೀನ ಬಂದು| ಹುಟ್ಟದಿರಿ ಕಂದಗಳೆ  ಮೆಟ್ಟುವರೆ ಕಾದಿಹರು  ದಿಟ್ಟತನ ತೋರುವರ ಬೊಮ್ಮಲಿಂಗ||೧೫೩||  ಮಲ ಮೇವ ಬಯಕೆಯಲಿ ಹೊಲಸು ನುಡಿಯುವ ಬಾಯಿ ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ| ಕೊಳೆತು ನಾರುವ ಕೆರೆಗೆ ಹೊಳೆನೀರ ಕಾಣುತಿರೆ ತಳವದೋ ಸೀಯುತಿದೆ ಬೊಮ್ಮಲಿಂಗ||೧೫೪|| ಮಲ ಮೇವ ಬಯಕೆ...

ಮಕ್ಕಳ ಪೋಷಣೆ ನಮ್ಮ ಹೊಣೆ

ಮಕ್ಕಳ ಪೋಷಣೆ ನಮ್ಮ ಹೊಣೆ  ಈಗಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ ಎಂಬುದು ಅರಿವಾಗುತ್ತಿಲ್ಲ. ಆದರೆ ಇದರಲ್ಲಿ ಅವರ ತಪ್ಪೇನು ಇಲ್ಲ. ಮಕ್ಕಳು ಎಂದರೆ ಮೃದು ಮಣ್ಣಿನ ಉಂಡೆಯಂತೆ ಅದನ್ನು ನಾವು ಯಾವುದೇ ಆಕೃತಿಗೆ ನಮ್ಮಿಚ್ಚೆಯಂತೆ ಅವರು ಬಲಿಯುವ ಮುನ್ನ ಬೆಳೆಯುವ ಮುನ್ನ ತಿದ್ದಿ ತಂದು ಉತ್ತಮ ಪ್ರಜೆಯಾಗಿ ನಿಲ್ಲಿಸಬಹುದೆಂದು ಈ ಹಿಂದೆ ಇದೇ ಪತ್ರಿಕೆಯಲ್ಲಿ ಬರೆದಿದ್ದೆ ಅದನ್ನು ಮತ್ತೊಮ್ಮೆ ಪುನರುಚ್ಚರಿಸುವಂತೆ ಕೆಲವು ವಿದ್ಯಮಾನಗಳು ನಡೆದಿವೆ ಎಂದರೆ ತಪ್ಪಾಗಲಾರದು. ಮಗು ಎಂಬ ಮೃದು ಮಣ್ಣಿನ ಉಂಡೆಯನ್ನು ಸರಿಯಾದ ಮೂರ್ತರೂಪ ಕೊಟ್ಟು ( ದೈಹಿಕವಾಗಿ ಅಲ್ಲ) ಬೆಳೆಸಬೇಕಾದ ತಂದೆ ತಾಯಿಗಳಿಗೆ ಆ ನಿಟ್ಟಿನಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲವೇಕೆ ಎಂಬುದು ನನ್ನ ಬಹುದಿನಗಳ ಪ್ರಶ್ನೆ ಪ್ರಶ್ನೆಯಾಗಿ ಉಳಿಯದೆ ಉತ್ತರ ದೊರಕಿದ ಅನುಭವವನ್ನು ತಮ್ಮ ಜೊತೆಗೆ ಹಂಚಿಕೊಳ್ಳುವೆ. ಮಾನವ ಬಹು ದೊಡ್ಡ ಗಾತ್ರದ ಆನೆಯನ್ನು ಸಹ ಪುಟ್ಟ ಅಂಕುಶದ ಸಹಾಯದಿಂದ ನಿಯಂತ್ರಿಸಬಲ್ಲ. ನಾಯಿ ನರಿ ಹುಲಿ ಸಿಂಹ ಕರಡಿ ಕೋತಿಗಳಂತಹ ಛಾತಿಯಿರುವ  ಕಾಡಾಡಿ ಬೀಡಾಡಿಗಳನ್ನು ಸಹ ತನ್ನ ಕಿರುಬೆರಳ ತುದಿಯಲ್ಲಿ ಕುಣಿಸಬಲ್ಲ. ಅದಕ್ಕಾಗಿ ಮೂಕಪ್ರಾಣಿಗಳಿಗೆ ಎಂತಹ ಕಠಿಣ ಶಿಕ್ಷೆಯನ್ನೂ ನೀಡಬಲ್ಲ. ಹೀಗೆಯೇ ನಮ್ಮ ಹಿರಿಯರು ನಮಗೆ ಸಾಮ ಧಾನ ಬೇಧ ದಂಡ ಎಂಬ ಬೇರೆ ಬೇರೆ ಆಯುಧಗಳ ಸಹಾಯದಿಂದ ನಮ್ಮನ್ನು ಕೂಡ ತಿದ್ದಿರುತ್ತಾರೆ ಎಂದರೆ ನಮ್ಮ ಪೀಳಿಗೆಯ ಎಲ್ಲರೂ ಒಪ್ಪುವಂತಹ ಮಾತು. ಆಗ ...

ಅತ್ಯಾಚಾರ ಮತ್ತು ಎನ್‌ಕೌಂಟರ್

ಅತ್ಯಾಚಾರ ಮತ್ತು ಎನ್‌ಕೌಂಟರ್ ~~~~~~~~~~~~~~~~~~ ಹತ್ತು ಜನ ತಪ್ಪಿತಸ್ಥರು ಕಾನೂನಿನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡರು ಪರವಾಗಿಲ್ಲ ಒಬ್ಬ ಅಮಾಯಕನಿಗೆ  ಶಿಕ್ಷೆಯಾಗಬಾರದು ಇದು ನಮ್ಮ ದೇಶದ ಕಾನೂನಿನ ಉವಾಚ. ಅದೆಷ್ಟು ಸರಿಯೋ ತಪ್ಪೋ ಅರ್ಥವಾಗದಾಗಿದೆ ಕಾನೂನಿನ ದೃಷ್ಟಿಯಲ್ಲಿ ಎಲ್ಲವೂ ಎಲ್ಲರೂ ಒಂದೇ ಆಗಿರಬೇಕಿತ್ತು ಆದರೆ ಇಲ್ಲಿ ಹಾಗಾಗಿಲ್ಲ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದುರ್ಬಲವಾದವರಿಗೆ ಒಂದು ನ್ಯಾಯ ಮತ್ತು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರಾದವರಿಗೆ ಮತ್ತೊಂದು ನ್ಯಾಯ ಅದೆಷ್ಟೋ ಮಂದಿ ಅಮಾಯಕ ಜನರು ತಮ್ಮದಲ್ಲದ ತಪ್ಪಿಗೆ ಇಂದು ಸಹ ಜೈಲಿನಲ್ಲಿ ಕೊಳೆಯುತ್ತಿರುವುದು ಸುಳ್ಳೇನಲ್ಲ. ಹಾಗೆಯೇ ತಪ್ಪುಗಳನ್ನು ಮೇಲಿಂದಮೇಲೆ ಉದ್ದೇಶ ಪೂರ್ವಕವಾಗಿ ಮಾಡಿಯೂ ಸಹ ಏನೂ ಮಾಡದವರಂತೆ ಗೌರವ ಪೂರ್ವಕವಾಗಿ ಜೀವನ ನಡೆಸುತ್ತಿರುವವರಿಗೂ ಕೊರತೆ ಏನಿಲ್ಲ. ಈ ದೇಶದ ಕಾನೂನು ಸರಿಯೇ ಅಥವಾ ದುಬೈನ ಕಾನೂನು ಸರಿಯೇ ಅಮೇರಿಕಾದ ಕಾನೂನು ಸರಿಯೇ ಎಂಬ ವಿಚಾರದಲ್ಲಿ ನಾವ್ಯಾರೂ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಆಯಾ ದೇಶದ ಕಾನೂನು ಅವರವರಿಗೆ ಸರಿ ಮತ್ತು ನ್ಯಾಯಯುತ ಎನಿಸಬಹುದು. ಈ ಜಗತ್ತಿನಲ್ಲಿ ಒಂದೇ ಕಾನೂನು ಕಟ್ಟಳೆ ಇರಲು ಸಾಧ್ಯವಿಲ್ಲ.  ನಮ್ಮ ದೇಶದ ಕಾನೂನಿನಲ್ಲಿ ಅಪರಾಧದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ದಾರಿಗಳನ್ನು ನಮ್ಮ ವಕೀಲ ವೃತ್ತಿಯ ಕೆಲವು ಮಿತ್ರರು ಕಂಡು ಕೊಂಡಿದ್ದಾರೆ ಎಂಬುದು ಸುಳ್ಳಲ್ಲ. ಮತ್ತು ಕ...

ಕಂಪ್ಲಾಪುರ ಮೋಹನ್ ಒಂದು ನೆನಪು

ಕಂಪ್ಲಾಪುರ ಮೋಹನ್  ಒಂದು ನೆನಪು ~~~~~~~~~~~~~~~~~~~~ "ತಾನೊಂದು ನೆನೆದರೆ ಮಾನವ ಬೇರೊಂದು ಬಗೆವುದು ದೈವ" ರೇಡಿಯೋ ಹಾಡು ಸಂದರ್ಭೋಚಿತ ಎನಿಸುತ್ತಿತ್ತು.  ೨೦೧೮ ಮೇ ತಿಂಗಳ ಯಾವುದೋ ಒಂದು ಪತ್ರಿಕೆಯಲ್ಲಿ ಕವಿಗೋಷ್ಠಿಯ ಜಾಹೀರಾತು. ಕಂಪ್ಲಾಪುರ ಮೋಹನ್‌ರವರ ದೂರವಾಣಿ ಸಂಖ್ಯೆ ದೊರಕಿತು. ನನ್ನ ಬಹಳ ದಿನಗಳ ಬಯಕೆ ಕಂಪ್ಲಾಪುರ ಮೋಹನ್‌ರವರ ಮನೆ ಮನೆ ಕವಿಗೋಷ್ಠಿಯಲ್ಲಿ ಭಾಗವಹಿಸುವುದಾಗಿತ್ತು. ಆದರೆ ಸಮಯ ಸಂದರ್ಭಗಳು ಒದಗಿಬರಲೇ ಇಲ್ಲ. ಆಗಾಗಲೇ ಹಾಸನದ ಮನೆ ಮನೆ ಕವಿಗೋಷ್ಠಿ ಬಳಗದಲ್ಲಿ ಕೊಟ್ರೇಶ್ ಉಪ್ಪಾರ್‌ರವರ ನೇತೃತ್ವದಲ್ಲಿ ನಡೆಯುತ್ತಿದ್ದ ಹಲವಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆ ಸಂದರ್ಭಗಳಲ್ಲಿ ಕೆಲವು ಆತ್ಮೀಯ ಗೆಳೆಯರ ಸಲಹೆಯ ಮೇರೆಗೆ ಕೊಡಗಿನಲ್ಲಿ ಮನೆ ಮನೆ ಕವಿಗೋಷ್ಠಿ ಬಳಗವನ್ನು ಸ್ಥಾಪಿಸಬೇಕು ಎಂಬ ಕನಸು ಗರಿಕೆದರಿತ್ತು. ಕಾಲ ಗಳಿಗೆ ಕೂಡಿಬರಬೇಕು ಮಾತ್ರವಲ್ಲದೆ ಅನುಭವ ಕೂಡ ಜೊತೆಯಲ್ಲಿ ಇರಬೇಕು ಎಂಬುದನ್ನು ಈಗಾಗಲೇ ಕೆಲವು ಕಹಿ ಅನುಭವಗಳನ್ನು ಮೆಲುಕು ಹಾಕಿ ಅಳೆದು ಸುರಿದು ಮೇ ತಿಂಗಳ ಕೊನೆಯ ವಾರದ ವೇಳೆಗೆ ನವೆಂಬರ್ ಹನ್ನೊಂದು ಎರಡು ಸಾವಿರದ ಹದಿನೆಂಟನೇ ಭಾನುವಾರದಂದು ಮನೆ ಮನೆ ಕಾವ್ಯಗೋಷ್ಠಿ ಬಳಗದ ಉದ್ಘಾಟನೆ ಎಂದು ಸ್ವತಃ ನಿರ್ಧರಿಸಿಬಿಟ್ಟೆ.  ಕಾರ್ಯಕ್ರಮ ಸ್ವಂತವಾಗಿ ಮಾಡಿ ಅನುಭವ ಇಲ್ಲ ಹಾಸನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಹೆಚ್ಚಾಗಿ ಗೆಳೆಯರ ಜೊತೆಗೆ ಸ್ಥಳವನ್ನು ತಲುಪುವ ವೇಳ...

ಮುಕ್ತಕ ಮಾಲೆ ೧೫೧ ರಿಂದ

ಸುತ್ತಲಿರುವವರ ಘನ ಚಿತ್ತವನು ಸೆಳೆಯುತಲಿ ಮತ್ತಿನೊಳು ಸಿಲುಕಿಸುವ ಯತ್ನವೇಕೆ| ಮುತ್ತಿನಿರವನರಿಯದೆ ಹತ್ತರೊಳಗೊಂದಾಗಿ ಸತ್ತುಹೋಗದಿರಿಯೆಂಬ  ಬೊಮ್ಮಲಿಂಗ|೧೫೧|| ಹುಟ್ಟಿದರು ಕೆಟ್ಟವರ ಮೆಟ್ಟಿ ಮುರಿಯಲು ಬಲ್ಲ  ಜಟ್ಟಿಯಂದದಿ ನಿಂದ ರಾಷ್ಟ್ರಬಂಧು| ಸೊಟ್ಟಮನಗಳಿಗಿಂದು ತಟ್ಟದಂತಿಹುದವರ  ದಿಟ್ಟನುಡಿಗಳು ಕಾಣ ಬೊಮ್ಮಲಿಂಗ||೧೫೨| ಕಟ್ಟಿ ಬೆಳೆಸುತ ದೇಶ ಮುಟ್ಟಿ ಜನಗಳ ಮನವ  ಮಟ್ಟಿಯೊಳು ಸೇರಿದರು ದೀನ ಬಂದು| ಹುಟ್ಟದಿರಿ ಕಂದಗಳೆ  ಮೆಟ್ಟುವರೆ ಕಾದಿಹರು  ದಿಟ್ಟತನ ತೋರುವರ ಬೊಮ್ಮಲಿಂಗ||೧೫೩||  ಮಲ ಮೇವ ಬಯಕೆಯಲಿ ಹೊಲಸು ನುಡಿಯುವ ಬಾಯಿ ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ| ಕೊಳೆತು ನಾರುವ ಕೆರೆಗೆ ಹೊಳೆನೀರ ಕಾಣುತಿರೆ ತಳವದೋ ಸೀಯುತಿದೆ ಬೊಮ್ಮಲಿಂಗ||೧೫೪|| ಮಲ ಮೇವ ಬಯಕೆಯಲಿ ಹೊಲಸು ನುಡಿಯುವ ಬಾಯಿ ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ| ಕೊಳೆತು ನಾರುವ ಕೆರೆಗೆ ಹೊಳೆನೀರ ಕಾಣುತಿರೆ ತಳವದೋ ಸೀಯುತಿದೆ ಬೊಮ್ಮಲಿಂಗ||೧೫೫|| ಉಂಡಿರುವ ತಟ್ಟೆಯೊಳು  ತುಂಡುಗಳು ಮುಗಿದಿರಲು ಚಂಡಿಯನು ತೆಗೆಯುವದು ನಾಯಿ ಬುದ್ಧಿ| ಅಂಡಿನಲಿ ಬೆಂಕಿಯನು  ಚೆಂಡುಗಾತ್ರದೊಳಿಟ್ಟು ಕಂಡಲ್ಲಿ ಬೊಗಳುವುದು  ಬೊಮ್ಮಲಿಂಗ.||೧೫೬|| ಯೋಗಿಗಳ ರೂಪದಲಿ ಜೋಗಿಗಳು ತಾವಾಗಿ  ರೋಗವನು ಹರಡುವುದು ತರವೆ ನಿಮಗೆ| ಭೋಗವನು ಕೈಗೊಂಡ ಗೂಗೆಗಳು ಜಗದಲಿ ವಿ ರಾಗಿಗಳ ವೇಷದೊಳು ಬೊಮ್ಮಲಿಂಗ||೧೫೭|| ಜೋಗಿ = ನಿಂತಲ್ಲಿ ನಿ...

ಕುಂತರು ನಿಂತರು ಸುರಿಯುತ್ತದೆ

ಕುಂತರು ನಿಂತರು ಸುರಿಯುತಿದೆ ~~~~~~~~~~~~~~~~~ ಅಗಜಾ ಬಂದಳು ತೌರಿನ ಮನೆಕಡೆ ಮಗನದೊ ಬಂದಿಹನೆನ್ನುತಲಿ ಜಗದಲಿ ಬಿಡದಿಹ ವರ್ಷದ ಲಾವಣಿ ಮಗರಿಸ ಸೇರಿಸಿ ಹಾಡುವೆನು ಅಮ್ಮನ ತೌರಿನ ಮೋದಕ ಮೆಲ್ಲುತ ಸುಮ್ಮನೆ ನಡಿಗೆಗೆ ಹೊರಟಿಹನು ಹೊಮ್ಮಿದ ಮಳೆಯಲಿ ನೆನೆಯಲು ಮೂಷಿಕ ಚಿಮ್ಮುತ ಛತ್ರಿಯ ತಂದಿಹನು ಆತನ ನೋಟಕೆ ಮನುಜರು ನೋವಲಿ ಸೋತಿಹ ಸಂಗತಿ ಕಾಣುತಿರೆ ಮಾತೆಯ ಕರೆಯಲು ಬಂದಿಹ ಗಣಪನು ಭೀತಿಯ ಪಡುವರ ನೋಡಿದನು ಎಂತಹ ಮಳೆಯಿದು ಗಳಿಗೆಯು ಬಿಡದೆಲೆ ಕುಂತರು ನಿಂತರು ಸುರಿಯುತಿದೆ ಸಂತರ ಹಾಗಿರ ಬೇಕಿಹ  ವರಣನು ಸಂತೆಯ ಕೆಡಿಸುತ ನಡೆದಿಹನೆ ದೂರದ ಬೆಟ್ಟದ ಬುಡದಲಿ ನಲುಗಿಹ ತೋರದ ಲೋಗರ ತಾ ನೋಡಿ  ಬಾರದ ಲೋಕಕೆ ನಡೆದಿಹ ಬಂಧುವ ತೀರದ ಬವಣೆಗೆ ಮರುಗಿದನು ಗಣಪನು ಕೋಪದಿ ವರುಣನ ಕೇಳಿದ ಜನಗಳ ಕಷ್ಟವ  ತಾನರಿತು ಗುಣವಿದು ಬಿಡದಿಹೆಯೆಂದಿನ ಕಾಲಕು  ಮನಗಳ ನೋಯಿಪೆ ಸರಿಯೇನು  ಬೆನಕನ ಮಾತಿಗೆ ಬೆದರುತಲೆಂದನು  ಕನಿಕರವಿರದೆಲೆ ಸುರಿದಿಲ್ಲ  ವನಗಳ ತರಿದಿರೆ ಪರಿಸರ ಕೆಡಿಸಿರೆ ನನಗಿದ ತಡೆಯಲು ಕಸುವಿಲ್ಲ ಮರಗಳ ಕಡಿದಿಹ ಮನುಜರ ಶಿಕ್ಷಿಸೆ ಹರನಲಿ  ನುಡಿದೆನು  ಫಲವಿಲ್ಲ  ವರವನು ನೀಡುವ ಭರದಲಿ ಪರಶಿವ  ಪರಿಸರ ಮರೆತಂತಿಹನಲ್ಲ ಪರಿಸರ ಜೀವನವರಿತಿಹ ಹರನಿವ  ಪರಿಪರಿ ಮರುಗಿದ ಮನದಲ್ಲಿ  ಮರವನು ತರಿಯುವ ಲೋಗರ ನರಕಕೆ ಕರೆಯಲು ಬಂದನು ಜವರಾಯ ಸುಮವದೊ ಸವೆವುದದೆನ್ನುವ ಪರಿಯಿರೆ ಸಮಸಮದೊಲವ...

ಬಾಳ್ವೆ ನಮದಾಯ್ತು

ಬಾಳ್ವೆ ನಮದಾಯ್ತು ~~~~~~~~~~~ ಕರಿಯ ರವಿಕೆಯ ತೊಟ್ಟು ನಗುತಲಿ ಜರಿಯ ಲಂಗದಿ ಮಿನುಗಿ  ಚಿಮ್ಮುತ ಹರನ ಸತಿಯನು ಹೋಲುವಂದದಿ ಬಂದೆ ನೀನಂದು| ಸುರಿವ ಚೆಲುವನು ಕಂಡು ಮನದಲಿ  ಕೊರಗಿ ನಲುಗಿದೆ ಕನಸ ಕಾಣುತ ಮರುಗಿ ಫಲವಿದೆಯೆನಿಸಲಿಲ್ಲವೊ ನಿನ್ನ ಚೆಲುವೆದುರು|| ಅತ್ತೆ ಮಗಳೇ ಕೇಳು ನಿನ್ನನು  ಸುತ್ತ ಹುಡುಕಿದೆ ನತ್ತು ನೋಡಲು ಕತ್ತು ಕೊಂಕಿಸಿ ಹೊರಟು ಹೋದೆಯ ಮನವ ನೀ ಕೆಡಿಸಿ|  ಕಿತ್ತು ಬರುತಿಹ ಭಾವದಿಂದಲಿ ಹೊತ್ತು ಹೊತ್ತಿಗೆ ಕೂಳು ತಿನ್ನದೆ ಸತ್ತು ಹೋಗುವ ಹಾದಿ ಹಿಡಿದಿದೆ ತನುವು ನಿನ್ನಾಣೆ|| ಅಮ್ಮನರಿತಳು ನನ್ನ ಭಾವನೆ ಸುಮ್ಮನಿರದೆಲೆ ನಿನ್ನ ತಂದೆಯ ತಮ್ಮನೆದುರಲಿ ಮಗನ ಮದುವೆಯ ವಿಷಯ ವಿಟ್ಟಿರಲು| ನಿಮ್ಮ ತಾಯಿಯ ಕೇಳಿ ನೋಡಲು  ಸಮ್ಮತಿಗಳನು ಪಡೆದು ಹಿರಿಯರ ಸಮ್ಮುಖದಲಿಯೆ ಲಗ್ನ ತಿಳಿಯಲು ಮನವ ಮಾಡಿದರು|| ಭಗ್ನವಾಯಿತು ಕಷ್ಟವೆಲ್ಲವು ಲಗ್ನ ಪತ್ರಿಕೆ ಹಂಚಿಕೊಂಡೆವು ವಿಘ್ನವಿರದೆಲೆ ಮದುವೆ ನಡೆಯಲು ಕೋರಿ ಕೊಂಡಿಹೆವು| ಅಗ್ನಿದೀಪನವಾಯ್ತು ಕುಂಡದಿ ವಿಘ್ನರಾಜನ ಕರುಣೆಯಿಂದಲಿ ಲಗ್ನ ಮುಗಿಯಲು ಹರುಷದಿಂದಿಹ ಬಾಳ್ವೆ ನಮದಾಯ್ತು.||  ಪಶಿವೈ  ಪಿ ಎಸ್ ವೈಲೇಶ ಕೊಡಗು ೨೭/೧೧/೨೦೧೯