ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ
ನಾ ಕಂಡಂತೆ ಕವಿ ಸಾಹಿತಿಗಳು :- ಡಾಕೇಶ್ ತಾಳಗುಂದ ಇವರ ಸಂಪೂರ್ಣ ಹೆಸರು:- ಡಾಕೇಶ್ವರಪ್ಪ.ಆರ್.ಬಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದ ರಾಮಪ್ಪ. ಬಿ. ಹಾಗೂ ರೇಣುಕಮ್ಮ ದಂಪತಿಯ ಮಗನಾಗಿ ೧೯೭೯ರ ಮಾರ್ಚ್ ೨೨ರ ಗುರುವಾರದಂದು ಜನಿಸಿದ್ದಾರೆ. ಇವರಿಗೆ ಸಹೋದರರಾಗಿ ಯೋಗೇಶ್ವರ, ಧರಣೇಶ್ ಸಹೋದರಿಯಾಗಿ ಭಾಗ್ಯಲಕ್ಷ್ಮೀ ಇದ್ದಾರೆ. ಪ್ರೀತಿಯ ಅತ್ತೆ ಸೋಮಕ್ಕನ ಮಮತೆ ಪ್ರೀತಿಯನ್ನು ತಾಯಿ ರೇಣುಕಮ್ಮನ ಅಕ್ಕರೆಯಂತೆಯೇ ಸಮನಾಗಿ ಉಂಡು ಬೆಳೆದವರು. ಎಂ.ಎ, ಬಿ.ಎಡ್. ಎನ್ ಇ ಟಿ ಪದವಿಗಳನ್ನು ಪಡೆದ ಬಳಿಕ ೦೭.೦೮.೨೦೦೮ ರಿಂದ ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ ಅಂಚೆ ಬಂಟ್ವಾಳ ತಾಲೂಕ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದ್ದಾರೆ. ದಿನಾಂಕ ೦೧.೦೪.೨೦೧೫ ರಿಂದ ೧೧.೧೧.೨೦೧೬ರ ವರೆಗೆ ಪ್ರಭಾರ ಮುಖ್ಯಶಿಕ್ಷಕನಾಗಿ ಅದೇ ಶಾಲೆಯಲ್ಲಿ ಬಡ್ತಿ ಪಡೆದು ಸೇವೆ ಮುಂದುವರಿಸಿದ್ದಾರೆ. ೧೨.೧೧.೨೦೧೬ ರಿಂದ ಸರಕಾರಿ ಪ್ರೌಢಶಾಲೆ ಕುಂಚೂರು ಹಿರೇಕೆರೂರು ತಾಲೂಕು ಹಾವೇರಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸವಳಂಗದಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕನಾಗಿ ಪ್ರಸ್ತುತದವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಎಸ್.ಎಲ್.ಸಿ ಯಲ್ಲಿ...