ಸುತ್ತಲಿರುವವರ ಘನ ಚಿತ್ತವನು ಸೆಳೆಯುತಲಿ ಮತ್ತಿನೊಳು ಸಿಲುಕಿಸುವ ಯತ್ನವೇಕೆ| ಮುತ್ತಿನಿರವನರಿಯದೆ ಹತ್ತರೊಳಗೊಂದಾಗಿ ಸತ್ತುಹೋಗದಿರಿಯೆಂಬ ಬೊಮ್ಮಲಿಂಗ|೧೫೧|| ಸುತ್ತಲಿರುವವರ ಘನ ಚಿತ್ತವನು ಸೆಳೆಯುತಲಿ ಮತ್ತಿನೊಳು ಸಿಲುಕಿಸುವ ಯತ್ನವೇಕೆ| ಮುತ್ತಿನಿರವನರಿಯದೆ ಹತ್ತರೊಳಗೊಂದಾಗಿ ಸತ್ತುಹೋಗದಿರಿಯೆಂಬ ಬೊಮ್ಮಲಿಂಗ|೧೫೧|| ಹುಟ್ಟಿದರು ಕೆಟ್ಟವರ ಮೆಟ್ಟಿ ಮುರಿಯಲು ಬಲ್ಲ ಜಟ್ಟಿಯಂದದಿ ನಿಂದ ರಾಷ್ಟ್ರಬಂಧು| ಸೊಟ್ಟಮನಗಳಿಗಿಂದು ತಟ್ಟದಂತಿಹುದವರ ದಿಟ್ಟನುಡಿಗಳು ಕಾಣ ಬೊಮ್ಮಲಿಂಗ||೧೫೨| ಹುಟ್ಟಿದರು ಕೆಟ್ಟವರ ಮೆಟ್ಟಿ ಮುರಿಯಲು ಬಲ್ಲ ಜಟ್ಟಿಯಂದದಿ ನಿಂದ ರಾಷ್ಟ್ರಬಂಧು| ಸೊಟ್ಟಮನಗಳಿಗಿಂದು ತಟ್ಟದಂತಿಹುದವರ ದಿಟ್ಟನುಡಿಗಳು ಕಾಣ ಬೊಮ್ಮಲಿಂಗ||೧೫೨| ಕಟ್ಟಿ ಬೆಳೆಸುತ ದೇಶ ಮುಟ್ಟಿ ಜನಗಳ ಮನವ ಮಟ್ಟಿಯೊಳು ಸೇರಿದರು ದೀನ ಬಂದು| ಹುಟ್ಟದಿರಿ ಕಂದಗಳೆ ಮೆಟ್ಟುವರೆ ಕಾದಿಹರು ದಿಟ್ಟತನ ತೋರುವರ ಬೊಮ್ಮಲಿಂಗ||೧೫೩|| ಕಟ್ಟಿ ಬೆಳೆಸುತ ದೇಶ ಮುಟ್ಟಿ ಜನಗಳ ಮನವ ಮಟ್ಟಿಯೊಳು ಸೇರಿದರು ದೀನ ಬಂದು| ಹುಟ್ಟದಿರಿ ಕಂದಗಳೆ ಮೆಟ್ಟುವರೆ ಕಾದಿಹರು ದಿಟ್ಟತನ ತೋರುವರ ಬೊಮ್ಮಲಿಂಗ||೧೫೩|| ಮಲ ಮೇವ ಬಯಕೆಯಲಿ ಹೊಲಸು ನುಡಿಯುವ ಬಾಯಿ ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ| ಕೊಳೆತು ನಾರುವ ಕೆರೆಗೆ ಹೊಳೆನೀರ ಕಾಣುತಿರೆ ತಳವದೋ ಸೀಯುತಿದೆ ಬೊಮ್ಮಲಿಂಗ||೧೫೪|| ಮಲ ಮೇವ ಬಯಕೆ...
Posts
Showing posts from February, 2020