ಮಕ್ಕಳ ಪೋಷಣೆ ನಮ್ಮ ಹೊಣೆ
ಮಕ್ಕಳ ಪೋಷಣೆ ನಮ್ಮ ಹೊಣೆ ಈಗಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ ಎಂಬುದು ಅರಿವಾಗುತ್ತಿಲ್ಲ. ಆದರೆ ಇದರಲ್ಲಿ ಅವರ ತಪ್ಪೇನು ಇಲ್ಲ. ಮಕ್ಕಳು ಎಂದರೆ ಮೃದು ಮಣ್ಣಿನ ಉಂಡೆಯಂತೆ ಅದನ್ನು ನಾವು ಯಾವುದೇ ಆಕೃತಿಗೆ ನಮ್ಮಿಚ್ಚೆಯಂತೆ ಅವರು ಬಲಿಯುವ ಮುನ್ನ ಬೆಳೆಯುವ ಮುನ್ನ ತಿದ್ದಿ ತಂದು ಉತ್ತಮ ಪ್ರಜೆಯಾಗಿ ನಿಲ್ಲಿಸಬಹುದೆಂದು ಈ ಹಿಂದೆ ಇದೇ ಪತ್ರಿಕೆಯಲ್ಲಿ ಬರೆದಿದ್ದೆ ಅದನ್ನು ಮತ್ತೊಮ್ಮೆ ಪುನರುಚ್ಚರಿಸುವಂತೆ ಕೆಲವು ವಿದ್ಯಮಾನಗಳು ನಡೆದಿವೆ ಎಂದರೆ ತಪ್ಪಾಗಲಾರದು. ಮಗು ಎಂಬ ಮೃದು ಮಣ್ಣಿನ ಉಂಡೆಯನ್ನು ಸರಿಯಾದ ಮೂರ್ತರೂಪ ಕೊಟ್ಟು ( ದೈಹಿಕವಾಗಿ ಅಲ್ಲ) ಬೆಳೆಸಬೇಕಾದ ತಂದೆ ತಾಯಿಗಳಿಗೆ ಆ ನಿಟ್ಟಿನಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲವೇಕೆ ಎಂಬುದು ನನ್ನ ಬಹುದಿನಗಳ ಪ್ರಶ್ನೆ ಪ್ರಶ್ನೆಯಾಗಿ ಉಳಿಯದೆ ಉತ್ತರ ದೊರಕಿದ ಅನುಭವವನ್ನು ತಮ್ಮ ಜೊತೆಗೆ ಹಂಚಿಕೊಳ್ಳುವೆ. ಮಾನವ ಬಹು ದೊಡ್ಡ ಗಾತ್ರದ ಆನೆಯನ್ನು ಸಹ ಪುಟ್ಟ ಅಂಕುಶದ ಸಹಾಯದಿಂದ ನಿಯಂತ್ರಿಸಬಲ್ಲ. ನಾಯಿ ನರಿ ಹುಲಿ ಸಿಂಹ ಕರಡಿ ಕೋತಿಗಳಂತಹ ಛಾತಿಯಿರುವ ಕಾಡಾಡಿ ಬೀಡಾಡಿಗಳನ್ನು ಸಹ ತನ್ನ ಕಿರುಬೆರಳ ತುದಿಯಲ್ಲಿ ಕುಣಿಸಬಲ್ಲ. ಅದಕ್ಕಾಗಿ ಮೂಕಪ್ರಾಣಿಗಳಿಗೆ ಎಂತಹ ಕಠಿಣ ಶಿಕ್ಷೆಯನ್ನೂ ನೀಡಬಲ್ಲ. ಹೀಗೆಯೇ ನಮ್ಮ ಹಿರಿಯರು ನಮಗೆ ಸಾಮ ಧಾನ ಬೇಧ ದಂಡ ಎಂಬ ಬೇರೆ ಬೇರೆ ಆಯುಧಗಳ ಸಹಾಯದಿಂದ ನಮ್ಮನ್ನು ಕೂಡ ತಿದ್ದಿರುತ್ತಾರೆ ಎಂದರೆ ನಮ್ಮ ಪೀಳಿಗೆಯ ಎಲ್ಲರೂ ಒಪ್ಪುವಂತಹ ಮಾತು. ಆಗ ...