ನಾ ಕಂಡಂತೆ ಕವಿ ಸಾಹಿತಿಗಳು;- ಅಭಿಜ್ಞಾ.ಪಿ.ಎಮ್ ಗೌಡ
ನಾ ಕಂಡಂತೆ ಕವಿ ಸಾಹಿತಿಗಳು;- ಅಭಿಜ್ಞಾ.ಪಿ.ಎಮ್ ಗೌಡ ಇವರು ಅಭಿಜ್ಞಾ ಪಿ.ಎಮ್.ಗೌಡ. ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಮಣ್ಣ, ಪುಟ್ಟಮ್ಮ ದಂಪತಿಯ ಪುತ್ರಿ. ಅಭಿಜ್ಞಾ.ಪಿ.ಎಂ.ಗೌಡರು ತಮ್ಮ ವಿದ್ಯಾಭ್ಯಾಸವನ್ನು ನಾಗಮಂಗಲದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿ ಯು ಸಿ, ಹಾಗೂ ಬಿ.ಎ. ಪದವಿಯತನಕ ಮುಗಿಸಿ ಬಿ.ಇಡಿ, ಪದವಿಯನ್ನು ತುಮಕೂರಿನಲ್ಲಿ ಪಡೆದುಕೊಂಡಿದ್ದಾರೆ. ಆ ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಕನ್ನಡ ಸ್ನಾತಕೋತರ ಪದವಿ ಪಡೆದ ನಂತರ ಕನ್ನಡ ಶಿಕ್ಷಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. ಪ್ರವೃತ್ತಿಯಲ್ಲಿ ಬರೆವಣಿಗೆ. ಓದುವುದನ್ನು ಬಲವಾಗಿ ಮೈಗೂಡಿಸಿಕೊಂಡು ಸಾಹಿತ್ಯದ ಚಟುವಟಿಕೆಯನ್ನು ಸ್ವಯಿಚ್ಛೆಯಿಂದ ಆಸ್ವಾಧಿಸುತ್ತಾ ಪಾಲ್ಗೊಳ್ಳುವುದನ್ನು ಬೆಳೆಸಿಕೊಂಡಿರುತ್ತಾರೆ. "ಶ್ರೀ ಶಾರದ ವೇದಿಕೆ"ಯೆಂಬ ವಾಟ್ಸ್‌ಅಪ್ ಬಳಗವೊಂದನ್ನು ನಿರ್ಮಿಸಿಕೊಂಡು ಸಾಹಿತ್ಯದ ಚಟುವಟಿಕೆಗಳನ್ನು ಪ್ರತಿವಾರವೂ ಆಯೋಜಿಸುತ್ತಿದ್ದಾರೆ. ಛಂದಸ್ಸಿನ ಹಲವು ವಿಷಯಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ಕೊಡುವಷ್ಟು ಪ್ರಬುದ್ಧೆಯಾಗಿದ್ದಾರೆ. ಕವಿಗೋಷ್ಟಿಗಳಲ್ಲಿ ಪಾಲ್ಗೊಳ್ಳುವಿಕೆ ಸಾಹ...