Posts

Showing posts from November, 2024

ಜಿ. ಎನ್. ಶ್ಯಾಮಸುಂದರ್

Image
ನಾ ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:-೩ ಜಿ.ಎನ್.ಶಾಮಸುಂದರ್  ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಶಾನುಭೋಗ್  ಜಿ.ಎಸ್. ನರಸಿಂಹ ಮೂರ್ತಿ ಹಾಗೂ ಜಿ.ಎನ್. ಕಮಲಮ್ಮ ಅವರ ದ್ವಿತೀಯ ಪುತ್ರರಾಗಿ ದಿನಾಂಕ 27-07-1956 ರಂದು ಜನಿಸಿದವರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಚಿಂತಾಮಣಿ ಮುನ್ಸಿಪಾಲ್ ಪ್ರೌಢಶಾಲೆಯಲ್ಲಿ ಮುಗಿಸಿದ ಇವರು ಟಿಸಿಹೆಚ್ ಪೂರೈಸಿ ಶಿಕ್ಷಕರಾಗಿ ಶಿಡ್ಲಘಟ್ಟದ ಅನುದಾನಿತ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಕರಾಗಿ 31 ವರ್ಷಗಳ ಸುದೀರ್ಘ ಸೇವೆ ಮಾಡಿ 2016 ರಲ್ಲಿ ವಯೋ ನಿವೃತ್ತಿಯನ್ನು ಪಡೆದಿರುವರು. ತಮ್ಮ ವಂಶಪಾರಂಪರ್ಯವಾಗಿ ಬಂದ ಸಂಗೀತವನ್ನು ಅಭ್ಯಸಿಸಿ ಕರ್ನಾಟಕ ಕಲಾಶ್ರೀ ಹೆಚ್. ಬಿ. ನಾರಾಯಣಾಚಾರ್ ಅವರಲ್ಲಿ ಪಿಟೀಲು ಅಭ್ಯಾಸ ಮಾಡಿದ್ದಾರೆ ಪ್ರವೃತ್ತಿಯಾಗಿ ನಾನ್ನೂರಕ್ಕೂ ಹೆಚ್ಚು ಹರಿಕಥೆಗಳಲ್ಲಿ, ನೂರಾರು ಸಂಗೀತ ಕಚೇರಿಗಳಲ್ಲಿ,ಹಲವಾರು ತ್ಯಾಗರಾಜರ ಆರಾಧನಾ ಕಾರ್ಯಕ್ರಮಗಳಲ್ಲಿ ತಮ್ಮ ಅಮೂಲ್ಯವಾದ ಪಿಟೀಲು ವಾದನದ ಸಹಕಾರ ನೀಡಿರುತ್ತಾರೆ. ಮೈಸೂರಿನ ದಸರಾ ಉತ್ಸವದಲ್ಲೂ ಸಹ ಎರಡುಬಾರಿ ಸಂಗೀತ ಕಾರ್ಯಕ್ರಮದಲ್ಲಿ  ವಾದ್ಯ ಸಹಕಾರ ನೀಡಿರುತ್ತಾರೆ. ಇವರ ಸಂಗೀತ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ-ಸಂಸ್ಥೆಗಳು ಇವರಿಗೆ  ನಾದಚಿಂತಾಮಣಿ,  ನಾದ ಚೂಡಾಮಣಿ, ...